---Advertisement---

VIDEO: ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ – Kannada News | Team India’s Sanjay Bangar son daughter Anaya Bangar change her look

---Advertisement---

ವಿರಾಟ್ ಕೊಹ್ಲಿ ಜೊತೆ ಆರ್ಯನ್ (ಅನನ್ಯಾ)

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ (Sanjay Bangar) ಅವರ ಪುತ್ರ/ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸುವಿಕೆಯೊಂದಿಗೆ ಎಂಬುದೇ ವಿಶೇಷ. ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ತಾನು ಹಾರ್ಮೋನ್ ಪರಿವರ್ತಿಸಿಕೊಂಡಿದ್ದು, ಇದೀಗ ಹುಡುಗನಿಂದ ಹುಡುಗಿಯಾಗಿ ರೂಪಾಂತರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಬದಲಾಗಿ ಅನನ್ಯಾ ಎಂದಿದ್ದಾರೆ.

ಅಂದಹಾಗೆ ಅನನ್ಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ

ಇದೀಗ ಅನನ್ಯಾ ಅವರ ನ್ಯೂ ಲುಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಕಪ್​ ಮಾಡಿಸಿಕೊಳ್ಳಲು ಸಲೂನ್​ಗೆ ತೆರಳಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅನನ್ಯಾ ಬಂಗಾರ್ ನ್ಯೂ ಲುಕ್​ ವಿಡಿಯೋ:

ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದ ಆರ್ಯನ್/ಅನನ್ಯಾ:

ಅನನ್ಯಾ ಬಂಗಾರ್ ಈ ಹಿಂದೆ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಸಹ ಶುರು ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ (ಅನನ್ಯಾ) ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದರು.

ಅನನ್ಯಾ ಬಂಗಾರ್​ ವಿಡಿಯೋ:

ಆದರೆ ಆ ಬಳಿಕ ದೇಹದಲ್ಲಾದ ಪರಿವರ್ತನೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಆರ್ಯನ್ ಆಗಿದ್ದ ಬಂಗಾರ್ ಪುತ್ರ ಇದೀಗ ಅನನ್ಯಾ ಆಗಿ ಬದಲಾಗಿದ್ದಾರೆ. ಅಲ್ಲದೆ ನನ್ನ ಈ ನಿರ್ಧಾರದ ಬಗ್ಗೆ ತುಂಬಾ ತೃಪ್ತಿಯಿದೆ ಎಂದು ಅವರು ತಿಳಿಸಿದ್ದಾರೆ.

ಕ್ರಿಕೆಟ್​ ಕಿಟ್​ನೊಂದಿಗೆ ಅನನ್ಯಾ ಬಂಗಾರ್:

ಸದ್ಯ ಅನನ್ಯಾ ಬಂಗಾರ್ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದು, ಹುಡುಗಿಯಾಗಿ ರೂಪಾಂತರಗೊಂಡಿರುವ ಅವರು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಕೆರಿಯರ್ ಮುಂದುವರೆಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರಕಟಿಸಲಾಗಿದೆ – ಮಧ್ಯಾಹ್ನ 2:32, ಥು, 3 ಏಪ್ರಿಲ್ 25



[

Join WhatsApp

Join Now
---Advertisement---

Leave a Comment