---Advertisement---

IPL 2025: ಐಪಿಎಲ್‌ನಲ್ಲಿ ನಾಳೆ ಬೆಂಕಿ- ಬಿರುಗಾಳಿಯ ಸೆಣಸಾಟ; ಸುರಿಯುತ್ತಾ ರನ್ ಮಳೆ? – Kannada News | Lucknow Super Giants vs Sunrisers Hyderabad: IPL 2025 Match Preview and Prediction

---Advertisement---

ಲಕ್ನೋ ಸೂಪರ್ ಜೈಂಟ್ಸ್ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 200 ಕ್ಕೂ ಹೆಚ್ಚು ರನ್ ಕಲೆಹಾಕಿತ್ತಾದರೂ ತಾನು ಮಾಡಿದ ತಪ್ಪುಗಳಿಂದಲೇ ಸೋಲನ್ನು ಅನುಭವಿಸಬೇಕಾಯಿತು. ಇದೀಗ ಲಕ್ನೋ ತನ್ನ ಎರಡನೇ ಪಂದ್ಯದಲ್ಲಿ ವಿಧ್ವಂಸಕ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಐಪಿಎಲ್ 2025 ರ (IPL 2025) ಈ ಪಂದ್ಯ ಗುರುವಾರ ಉಪ್ಪಳ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷದ ಫೈನಲಿಸ್ಟ್ ಎಸ್‌ಆರ್‌ಹೆಚ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 44 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ ಲಕ್ನೋ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಹೈದರಾಬಾದ್​ಗೆ ಬ್ಯಾಟಿಂಗ್ ವಿಭಾಗವೇ ಜೀವಾಳ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಒಂದು ಫೈಟರ್ ಜೆಟ್‌ನಂತಿದ್ದು, ಅವಕಾಶ ಸಿಕ್ಕಾಗಲೆಲ್ಲಾ ಎದುರಾಳಿ ತಂಡವನ್ನು ನಾಶಪಡಿಸುತ್ತದೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ 47 ಎಸೆತಗಳಲ್ಲಿ ಅಜೇಯ 107 ರನ್ ಗಳಿಸುವ ಮೂಲಕ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಕ್ ಕ್ಲಾಸೆನ್ ಈಗಾಗಲೇ ಅಪಾಯಕಾರಿ ಫಾರ್ಮ್‌ನಲ್ಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಕೂಡ ಆರ್‌ಆರ್ ವಿರುದ್ಧ 200+ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದರು. ಹೈದರಾಬಾದ್‌ ತಂಡದ ಬ್ಯಾಟಿಂಗ್ ಎಷ್ಟು ಸ್ಫೋಟಕವಾಗಿದೆಯೆಂದರೆ, ಒಂದು ಸಣ್ಣ ತಪ್ಪು ಕೂಡ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಹುದು.

ಲಕ್ನೋ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಿದೆ

ಎಸ್‌ಆರ್‌ಹೆಚ್​ನಂತೆ ಲಕ್ನೋ ತಂಡದಲ್ಲು ಅಪಾಯಕಾರಿ ಬ್ಯಾಟ್ಸ್‌ಮನ್​ಗಳಿದ್ದಾರೆ. ಮಿಚೆಲ್ ಮಾರ್ಷ್​, ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದೀಗ ಎಸ್‌ಆರ್‌ಹೆಚ್ ವಿರುದ್ಧ ಈ ಮೂವರು ಮತ್ತೆ ಸಿಡಿದರೆ ಈ ಪಂದ್ಯ ಹೈಸ್ಕೋರರ್ ಪಂದ್ಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಾಗ್ಯೂ ಡೆಲ್ಲಿ ವಿರುದ್ಧ ಮಾಡಿದ ತಪ್ಪುಗಳನ್ನು ಲಕ್ನೋ ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಿದೆ.

ಡೆಲ್ಲಿ ವಿರುದ್ಧ ಲಕ್ನೋ ತಂಡ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಕೊನೆಯ 8 ಓವರ್‌ಗಳಲ್ಲಿ ಕೇವಲ 76 ರನ್‌ ಬಂದರೆ, 6 ವಿಕೆಟ್‌ಗಳು ಪತನಗೊಂಡವು. ರಿಷಭ್ ಪಂತ್ 6 ಎಸೆತಗಳಲ್ಲಿ 0 ರನ್ ಗಳಿಸಿದಲ್ಲದೆ, ಕೊನೆಯ ಓವರ್‌ನಲ್ಲಿ ಸ್ಟಂಪಿಂಗ್ ತಪ್ಪಿಸಿಕೊಂಡರು. ಎಲ್‌ಎಸ್‌ಜಿಯ ಬೌಲಿಂಗ್ ಕೂಡ ದುರ್ಬಲವಾಗಿ ಕಾಣುತ್ತಿದೆ. ರವಿ ಬಿಷ್ಣೋಯ್ ಸ್ವಲ್ಪ ಅನುಭವಿ, ಇದನ್ನು ಬಿಟ್ಟರೆ ಮಣಿಮಾರನ್ ಸಿದ್ಧಾರ್ಥ್ ಮತ್ತು ದಿಗ್ವೇಶ್ ರಥಿ ಖಂಡಿತವಾಗಿಯೂ ಉತ್ತಮ ಬೌಲರ್‌ಗಳು ಆದರೆ ಅವರು ಹೆಚ್ಚು ಪಂದ್ಯಗಳನ್ನು ಆಡಿಲ್ಲ.

IPL 2025: ಗೆಲುವಿನ ಸಂಭ್ರಮದಲ್ಲಿರುವ ಡೆಲ್ಲಿ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಸನ್‌ರೈಸರ್ಸ್ ಹೈದರಾಬಾದ್‌: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಆಡಮ್ ಝಂಪಾ.

ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಈಡೆನ್ ಮಾರ್ಕ್ರಾಮ್, ನಿಕೋಲಸ್ ಪರ್ಲಾನ್, ರಿಷಭ್ ಪಂತ್ (ಡೇ & ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಯುಷ್ ಬಾದೋನಿ, ಶಹಾಬಾಜ್ ಅಹ್ಮದ್, ಶಾರ್ಡೂಲ್ ತಕೂರ್, ರವಿ ಬಿಶಾನಾಯ್, ಮಣಿಮರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

[

Join WhatsApp

Join Now
---Advertisement---

Leave a Comment