---Advertisement---

IPL 2025: ಇದಕ್ಕಾಗಿಯೇ ಈ ನಿಮಯ ಇರೋದು: ರೋಹಿತ್, ಧೋನಿಗೆ ಫಾಫ್ ಡುಪ್ಲೆಸಿಸ್ ತಿರುಗೇಟು – Kannada News | This is why Impact Player rule is there: Faf du Plessis

---Advertisement---

ಐಪಿಎಲ್ 2025: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಸೀಸನ್-18 ರಲ್ಲಿ ಶುಭಾರಂಭ ಮಾಡಿದೆ. ಅದು ಸಹ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್​ನ ರೋಚಕ ಜಯ ಸಾಧಿಸುವ ಮೂಲಕ. ವಿಶಾಖಪಟ್ಟಣದ ವೈಎಸ್​ಆರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) 20 ಓವರ್​ಗಳಲ್ಲಿ 209 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ರನ್​ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಇನ್ನು 65 ರನ್ ಆಗುವಷ್ಟರಲ್ಲಿ ವಿಕೆಟ್​ಗಳ ಸಂಖ್ಯೆ 5 ಕ್ಕೇರಿತು. ಈ ಹಂತದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಶುತೋಷ್ ಶರ್ಮಾ ಕೇವಲ 31 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 66 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 1 ವಿಕೆಟ್​ನ ರೋಚಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ

ಅಶುತೋಷ್ ಶರ್ಮಾ ಝಲಕ್:

ಈ ಗೆಲುವಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕ ಫಾಫ್ ಡುಪ್ಲೆಸಿಸ್, ಇದೊಂದು ಅದ್ಭುತ ಪಂದ್ಯವಾಗಿತ್ತು ಎಂದಿದ್ದಾರೆ. ಅಲ್ಲದೆ ಬಹಳಷ್ಟು ಕ್ರಿಕೆಟಿಗರು ಐಪಿಎಲ್‌ನಲ್ಲಿನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ದೂರುತ್ತಾರೆ. ಈ ನಿಯಮ ಯಾಕಿದೆ ಎಂಬುದಕ್ಕೆ ಈ ಪಂದ್ಯದ ಫಲಿತಾಂಶವೇ ಸಾಕ್ಷಿ.

ಏಕೆಂದರೆ ಒಂದು ಮ್ಯಾಚ್ ಸಂಪೂರ್ಣ ಮುಗಿದೇ ಹೋಯ್ತು ಎಂದು ಅಂದುಕೊಂಡಾಗ, ಯಾರಾದರೂ ಬಂದು ಹೀಗೆಲ್ಲಾ ಆಡುತ್ತಾರೆ. ಇಡೀ ಪಂದ್ಯದ ಚಿತ್ರಣವನ್ನು ಬದಲಿಸುತ್ತಾರೆ. ಅಲ್ಲದೆ ರೋಚಕ ಹೋರಾಟದೊಂದಿಗೆ ಗೆಲುವು ತಂದುಕೊಡುತ್ತಾರೆ. ಇಂತಹ ರೋಚಕತೆಗಾಗಿಯೇ ಈ ನಿಯಮವಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ನಮ್ಮ ತಂಡ ಖುದ್ದು 5 ವಿಕೆಟ್ ಕಳೆದುಕೊಂಡಾಗ ಖುದ್ದು ನಾನೇ ಇನ್ನೂ ನಾವು ಗೆಲ್ಲಲ್ಲ ಅಂದುಕೊಂಡಿದ್ದೆ. ಇದಾಗ್ಯೂ ಇಂಪ್ಯಾಕ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಆಟಗಾರ ಒಂದಷ್ಟು ವ್ಯತ್ಯಾಸವನ್ನು ಉಂಟು ಮಾಡಬಲ್ಲರು ಎಂದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಅದರಂತೆ ಅಶುತೋಷ್ ಶರ್ಮಾ ಹಾಗೂ ವಿಪ್ರಾಜ್ ನಿಗಮ್ ತುಂಬಾ ಸಲೀಸಾಗಿ ಆಡಿದರು.

ಅದರಲ್ಲೂ ಕೊನೆಯ ಓವರ್​ನಲ್ಲಿ ಮೋಹಿತ್ ಶರ್ಮಾ ಕಲೆಹಾಕಿದ ಒಂದು ರನ್, ನನಗೆ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ 438 ರನ್ ಚೇಸ್ ಮಾಡಿದಾಗ ಮಖಾಯ ಎನ್ಟಿನಿ ಗಳಿಸಿದ 1 ರನ್ ಅನ್ನು ನೆನಪಿಸಿತು. ಇದು ಮೋಹಿತ್ ಶರ್ಮಾ ಅವರ ವೃತ್ತಿಜೀವನದಲ್ಲೇ ಅತ್ಯಂತ ಪ್ರಮುಖವಾದ ಒಂದು ರನ್ ಆಗಿರಲಿದೆ ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಒಟ್ಟಿನಲ್ಲಿ ರಣರೋಚಕ ಹೋರಾಟದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶುಭಾರಂಭ ಮಾಡಿರುವುದು ಸಖತ್ ಖುಷಿ ಕೊಟ್ಟಿದೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಡೆ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿದೆ ಎಂದು ಫಾಫ್ ಡುಪ್ಲೆಸಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗೆ ವಿರೋಧ:

ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ರಿಷಭ್ ಪಂತ್ ಸೇರಿದಂತೆ ಅನೇಕ ಆಟಗಾರರು ಇಂಪ್ಯಾಕ್ಟ್ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಆಲ್​ರೌಂಡರ್​ನ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಎಂದಿದ್ದರು.

ಇದನ್ನೂ ಓದಿ: VIDEO: ಗೆಲ್ಲುವ ಪಂದ್ಯವನ್ನು ‘ಕೈ ಚೆಲ್ಲಿದ’ ರಿಷಭ್ ಪಂತ್

ಇದನ್ನೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ಫಾಫ್ ಡುಪ್ಲೆಸಿಸ್, ಬಹಳಷ್ಟು ಕ್ರಿಕೆಟಿಗರು ಐಪಿಎಲ್‌ನಲ್ಲಿನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ದೂರುತ್ತಿದ್ದಾರೆ. ಆದರೆ ಈ ನಿಯಮ ಯಾಕಿದೆ ಎಂಬುದಕ್ಕೆ ಅಶುತೋಷ್ ಶರ್ಮಾ ಅವರ ಪ್ರದರ್ಶನವೇ ಸಾಕ್ಷಿ ಎಂದಿದ್ದಾರೆ.



[

Join WhatsApp

Join Now
---Advertisement---

Leave a Comment